ನೀವು ತುಂಬಾ ನೊಂದಿದ್ದೀರೆ ಬೆಟ್ಟದ ತಾಯಿ ಚಾಮುಂಡೇಶ್ವರಿ ಗೆ ಮನೆಯಲ್ಲೇ ಈ ಹರಕೆಯನ್ನು ಮಾಡಿ ಸಾಕು

Featured Article

ಇದು ಚಾಮುಂಡೇಶ್ವರಿಯ ವಿಸ್ಮಯ ಪವಾಡ,

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ನಿಮ್ಮ ಜೀವನದಲ್ಲಿ ಕಷ್ಟಗಳೇ ಇದ್ದರೆ ಬರಿ ನೋವುಗಳೆ ಇದ್ದರೆ ಅಥವಾ ನೀವು ಅಂದುಕೊಂಡ ಕಾರ್ಯಗಳು ಯಾವುದು ನೆರವೇರುವುದಿಲ್ಲ ಎಲ್ಲವೂ ನಿರ್ವಿಘ್ನವಾಗಿ ಸಾಗುತ್ತಿದೆ ಎನ್ನುವವರು ಈ ಒಂದು ಸಣ್ಣ ಪರಿಹಾರವನ್ನು ನೀವು ಮನೆಯಲ್ಲೇ ಕೂತು ಮಾಡಿಕೊಂಡರೆ ಖಂಡಿತವಾಗಿಯೂ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಅಂದರೆ ತಾಯಿ ಚಾಮುಂಡೇಶ್ವರಿಗೆ ಈ ರೀತಿ ಹರಕೆಯನ್ನು ಮನೆಯಲ್ಲೇ ಕುಳಿತು ಮಾಡಿಕೊಂಡರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ

ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ತುಂಬಾ ಪ್ರಸಿದ್ಧವಾದ ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಪ್ರಮುಖವಾದದ್ದು ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರ ತುಂಬಾನೇ ಜನಗಳು ಆಗಮಿಸುವುದರಿಂದ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನವನ್ನು ಪಡೆಯಬೇಕಾಗುತ್ತದೆ ಹಾಗೂ ಆಷಾಢ ಮಾಸದಲ್ಲೂ ಕೂಡ ತುಂಬಾನೇ ಪ್ರಬಲವಾದ ಶಕ್ತಿ ದೇವತೆಯನ್ನು ನೋಡಲು ದೇಶದ ಮೂಲೆ ಮೂಲೆಯಿಂದಲೂ ಜನಸಾಗರವೇ ಇಲ್ಲಿ ಬರುತ್ತದೆ.

ಹಾಗೂ ನವರಾತ್ರಿಯಂದು ಕೂಡ ವಿಶೇಷವಾದ ಪೂಜೆಗಳು ಈ ದೇವಸ್ಥಾನದಲ್ಲಿ ನಡೆಯುತ್ತೆ ಆದ್ದರಿಂದ ಆದಿಶಕ್ತಿ ಜಗನ್ಮಾತೆ ಚಾಮುಂಡೇಶ್ವರಿ ಯಾರು ಭಕ್ತಿಯಿಂದ ಪೂಜೆ ಮಾಡುತ್ತಾರೆ ಅವರ ಪ್ರತಿ ಹೆಜ್ಜೆಯನ್ನು ಕಾಯುತ್ತಾಳೆ ನಿಮ್ಮನ್ನು ತಲೆಕಾದು ಒಳ್ಳೆಯದನ್ನೇ ಮಾಡುತ್ತಾಳೆ.

ಇಂತಹ ಮಹಾತಾಯನ್ನ ನೆನೆದು ನೀವು ಮನೆಯಲ್ಲಿ ಇಂತಹ ಹರಕೆಯನ್ನು ಮಾಡಿಕೊಂಡರೆ ನಿಮ್ಮ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ ಅದು ಯಾವ ಹರಕೆ ಎಂದರೆ ವಾರದಲ್ಲಿ ಎರಡು ವಾರ ಮಂಗಳವಾರ ಆಗಿರಬಹುದು ಅಥವಾ ಶುಕ್ರವಾರ ಆಗಿರಬಹುದು ಈ ದಿನದಲ್ಲಿ ನೀವು ದೇವರ ಮನೆಯಲ್ಲಿ ತಾಯಿ ಚಾಮುಂಡೇಶ್ವರಿ ಫೋಟೋವಿನ ಮುಂದೆ ಕುಳಿತುಕೊಂಡು ಏನು ಮಾಡಬೇಕು ಎಂದರೆ

ಒಂದು ರೂಪಾಯಿ ಅಥವಾ ಎರಡು ರೂಪಾಯಿ ನಾಣ್ಯವನ್ನು ಅಥವಾ ಐದು ರೂಪಾಯಿ ನಾಣ್ಯ ಇಷ್ಟನ್ನು ಸೇರಿಸಿಕೊಂಡು ನೀವು ಅರಿಶಿಣದ ಬಟ್ಟೆಯನ್ನು ಇಟ್ಟು ಅದನ್ನು ಕಟ್ಟಬೇಕು ಹೀಗೆ ಮುಡಿಪು ಕಟ್ಟಿದ ನಂತರ ಸಂಕಲ್ಪವನ್ನು ಮಾಡಿಕೊಳ್ಳಬೇಕು ತಾಯಿ ನಾನು ನನ್ನ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದೇನೆ ನಾನು ಇಂತಹ ಕಷ್ಟದಿಂದ ಬಳಲುತ್ತಿದ್ದೇನೆ.

ದಯವಿಟ್ಟು ನೀನು ಇಂತಹ ಕಷ್ಟಗಳಿಂದ ನನ್ನನ್ನು ಪಾರು ಮಾಡಿದರೆ ಖಂಡಿತ ನಾನು ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳನ್ನು ಹೇರಿ ಬಂದು ನಿನ್ನ ದರ್ಶನವನ್ನು ಮಾಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಖಂಡಿತವಾಗಿಯು ತಾಯಿಯು ನಿಮ್ಮ ತಲೆಯನ್ನು ಕಾಯ್ತಾಳೆ ಜಗನ್ಮಾತೆ ಆದಿಶಕ್ತಿ ಶಕ್ತಿ ಸ್ವರೂಪಿಣಿ ತಾಯಿ ಚಾಮುಂಡೇಶ್ವರಿ ಮಹಾತಾಯಿ ಎಲ್ಲರಿಗೂ ಒಳ್ಳೆಯದು ಮಾಡುತ್ತಾಳೆ ಆಕೆಯನ್ನ ನಂಬಿ ಬಂದ ಭಕ್ತರನ್ನು ಎಂದು ಕೈ ಬಿಟ್ಟಿಲ್ಲ ಬಿಡುವುದು ಇಲ್ಲ.

Leave a Reply

Your email address will not be published. Required fields are marked *