ಪುರುಷರು ಶರೀರದಲ್ಲಿ ಯಾವ ಭಾಗದ ಮೇಲೆ ಸುಳಿ ಇದ್ದರೆ ಯಾವ ರೀತಿಯ ಲಕ್ಷಣಗಳನ್ನು ಕಾಣಬಹುದು

ಪುರುಷರು ಶರೀರದಲ್ಲಿ ಯಾವ ಭಾಗದ ಮೇಲೆ ಸುಳಿ ಇದ್ದರೆ ಯಾವ ರೀತಿಯ ಲಕ್ಷಣಗಳನ್ನು ಕಾಣಬಹುದು

ನಮಸ್ಕಾರ ಸ್ನೇಹಿತರೆ,ಪುರುಷರಲ್ಲಿ ಸಾಮಾನ್ಯವಾಗಿ ಅದರಲ್ಲೂ ಕೆಲವರಿಗೆ ಶರೀರದ ಮೇಲೆ ಸುಳಿ ಇರುವ ಲಕ್ಷಣಗಳು ಕಂಡುಬರುತ್ತದೆ ಈ ಸುಳಿ ಯಾವ ಭಾಗದ ಮೇಲೆ ಇದ್ದರೆ ಯಾವ ರೀತಿಯ ಫಲವನ್ನು ನೀಡುತ್ತದೆ ಅಂತ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ ನಾನು ನಿಮಗೆ ಹೇಳುತ್ತೇನೆ ಪುರುಷರ ಶರೀರದ ಮೇಲೆ ಸುಳಿಯು ಯಾವ ಭಾಗದ ಮೇಲೆ ಇದ್ದರೆ ಯಾವ ರೀತಿಯ ಲಕ್ಷಣಗಳನ್ನು ಸೂಚಿಸುತ್ತದೆ ಅಂತ ಹೇಳುತೀವಿ

ಮೊದಲಿಗೆ ಮುಂದಲೆ ಮೇಲೆ ಸುಳಿ ಇದ್ದರೆ ಭಾಗ್ಯವಂತ ರಾಗುವ ಲಕ್ಷಣಗಳನ್ನು ಸೂಚಿಸುವುದು ತಲೆಯ ಮಧ್ಯಭಾಗದಲ್ಲಿ ಸುಳಿ ಇದ್ದರೆ ತೊಂದರೆಗಳು ಸಂಭವಿಸುತ್ತವೆ ಬಲಕಿವಿಯ ಮೇಲೆ ಸುಳಿ ಇದ್ದರೆ ಶುಭವೆಂದು ತಿಳಿಯಬೇಕು ಹಾಗೆಯೇ ಎಡ ಕಿವಿಯ ಮೇಲೆ ಸುಳಿ ಇದ್ದರೆ ಅಶುಭವೆಂದು ಅರಿಯಬೇಕು ಮತ್ತು ಅದು ಒಳ್ಳೆಯದಲ್ಲ ಅಂತ ತಿಳಿದುಕೊಳ್ಳಬೇಕು ಬಲ ಬುಜದ ಮೇಲೆ ಸುಳಿ ಇದ್ದರೆ ಹೆತ್ತವರ ಪ್ರೀತಿಗೆ ಪಾತ್ರನಾಗುವನು ಒಂದು ವೇಳೆ ಎಡ ಬುಜದ ಮೇಲೆ ಸುಳಿ ಇದ್ದರೆ ಹಾನಿ ಉಂಟಾಗುವುದು

ಹೊಟ್ಟೆಯ ಮೇಲೆ ಸುಳಿ ಇದ್ದರೆ ಕಷ್ಟಗಳು ಪ್ರಾಪ್ತಿಯಾಗುತ್ತವೆ ಒಂದು ವೇಳೆ ಬೆನ್ನಿನ ಮೇಲೆ ಅಥವಾ ಎದೆಯ ಮೇಲೆ ಸುಳಿ ಇದ್ದರೆ ಲಾಭದಾಯಕವೆಂದು ತಿಳಿಯಬೇಕು ಹೊಕ್ಕಳ ಮೇಲೆ ಸುಳಿ ಇದ್ದರೆ ಗಂಡಾಂತರಗಳನ್ನು ಎದುರಿಸಬೇಕಾಗುವುದು ರೋಗಪೀಡಿತನು ಸಹ ಆಗಿರುತ್ತಾನೆ ಬಲ ತೋಳಿನ ಮೇಲೆ ಸುಳಿ ಇದ್ದರೆ ಶುಭವೆಂದು ತಿಳಿಯಬೇಕು ಮತ್ತು ಎಡ ತೋಳಿನ ಮೇಲೆ ಸುಳಿ ಏನಾದರೂ ಕಂಡುಬಂದಲ್ಲಿ ಅಶುಭವೆಂದು ಅರಿಯಬೇಕು ಬಲ ತೊಡೆಯ ಮೇಲೆ ಸುಳಿ ಇದ್ದರೆ ಒಳ್ಳೆಯದಾಗುವುದು ಒಂದು ವೇಳೆ ಎಡತೊಡೆಯ ಮೇಲೆ ಸುಳಿ ಇದ್ದರೆ ಕೆಟ್ಟದು ಆಗುವುದು ಎಂದು ಭಾವಿಸಬೇಕು ಈ ರೀತಿಯಾಗಿ ಶಾಸ್ತ್ರಜ್ಞರು ಹೇಳಿದ್ದಾರೆ ಈ ಸುಳಿ ಅನ್ನುವುದು ಶರೀರದ ಮೇಲೆ ಸುಳಿ ಆಕಾರದಲ್ಲಿ ಯಾವುದೋ ಒಂದು ಭಾಗದ ಮೇಲೆ ಇರುತ್ತದೆ ನಾವುಗಳು ಅದನ್ನು ನಿಧಾನವಾಗಿ ಗಮನಿಸಿದರೆ ನಮಗೆ ಅರ್ಥವಾಗುತ್ತದೆ

Leave A Reply

Your email address will not be published.