ಬುಧವಾರ ಜನಿಸಿರುವ ವ್ಯಕ್ತಿಗಳ ಕಲಾತ್ಮಕ ಗುಣಗಳು

Featured Article

ಬುಧವಾರ ಜನಿಸಿರುವ ವ್ಯಕ್ತಿಗಳ ಅದೃಷ್ಟದ ಬಣ್ಣಗಳು, ಅದೃಷ್ಟದ ದಿನಗಳು ಹಾಗೂ ಅದೃಷ್ಟದ ವಾರಗಳು ಹಾಗು ಇವರ ಇತರೆ ಗುಣ ಲಕ್ಷಣಗಳು ಹಾಗೂ ಇವರ ಅದೃಷ್ಟದ ವೃತ್ತಿಗಳ ಬಗ್ಗೆ ತಿಳಿಯೋಣ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರದ ಅಧಿಪತಿ ಬುಧ ಗ್ರಹವಾಗಿರುತ್ತದೆ. ಆದ್ದರಿಂದ ಈ ವ್ಯಕ್ತಿಗಳ ಮೇಲೆ ಬುಧ ಗ್ರಹದ ವಿಶೇಷ ಪ್ರಭಾವ ಹೆಚ್ಚಾಗಿ ಇರುತ್ತದೆ.ಇವರು ಹೆಚ್ಚು ಸ್ನೇಹಿತರನ್ನು ಗಳಿಸಲು ಇಚ್ಛಿಸುತ್ತಾರೆ.

ಇವರು ಇಂದ್ರಿಯ ಭಾವನಾತ್ಮಕ ಬದಲಾವಣೆ ಹಾಗೂ ಹಠದ ಸ್ವಭಾವದವರು.ಇವರು ಮಾತಿನಲ್ಲಿ ಹಾಸ್ಯ ಪ್ರವೃತ್ತಿಯನ್ನು ಹೊಂದಿರುತ್ತಾರೆ.ಇವರು ಇನ್ನೊಬ್ಬರನ್ನ ನಿಗ್ರಹಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಕೆಲಸದಲ್ಲಿ ಆತುರ ಸ್ವಭಾವವನ್ನು ತೋರುತ್ತಾರೆ.ಇವರು ಕೆಲಸವನ್ನು ಪರಿಪೂರ್ಣವಾಗಿ ಮಾಡಿ ಮುಗಿಸಲು ಇಚ್ಚಿಸುತ್ತಾರೆ.

ಇವರ ಮನಸ್ಸು ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚುಗೊಳಿಸಲು ಹಂಬಲಿಸುತ್ತದೆ.ಇವರಿಗೆ ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ.ಇವರು ಯಾವುದೇ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಲು ಅವರ ಬುದ್ಧಿಶಕ್ತಿಯನ್ನು ಹಾಗೂ ಜ್ಞಾಪಕ ಶಕ್ತಿಯನ್ನು ಉಪಯೋಗಿಸುತ್ತಿರುತ್ತಾರೆ. ಇವರು ಹೆಚ್ಚು ಜನರನ್ನ ಮಾತಿನಿಂದ ಆಕರ್ಷಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಬುಧವಾರ ಜನಿಸಿರುವ ವ್ಯಕ್ತಿಗಳು ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕಾದ ಅಂಶಗಳೆಂದರೆ ಇವರಿಗೆ ಚರ್ಮ ರೋಗ, ನರಗಳ ದೌರ್ಬಲ್ಯ, ನಿದ್ರಾಹೀನತೆ, ಪಾರ್ಶ್ವವಾಯು, ಬೆನ್ನು ನೋವು ಹಾಗೂ ಅಜೀರ್ಣದಿಂದ ಬಳಲುವ ಸಾಧ್ಯತೆಗಳು ಇರುತ್ತದೆ.

ತಮ್ಮ ಆರೋಗ್ಯ ವೃದ್ಧಿಗೋಸ್ಕರ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಬೇಕು ಹಾಗೂ ಯೋಗ, ಧ್ಯಾನ, ಪ್ರಾಣಾಯಮಗಳನ್ನು ಮಾಡೋದ್ರಿಂದ ಇವರು ಆರೋಗ್ಯವಂತರಾಗಿ ಬಾಳಬಹುದು ಹಾಗೂ ಬುಧವಾರ ಜನಿಸಿರುವ ವ್ಯಕ್ತಿಗಳು ಪ್ರತಿದಿನ ಓಂ ಗಮ್ ಗಣಪತಯೇ ನಮ ಮಂತ್ರವನ್ನು ಹನ್ನೊಂದು ಬಾರಿ ಪಠಿಸಿದ್ರೆ ಆ ಗಣಪತಿಯ ಕೃಪೆಯಿಂದ ಆಯುರಾರೋಗ್ಯವನ್ನು ಪಡೆದು ಉನ್ನತ ಮಟ್ಟದ ಯಶಸ್ಸನ್ನ ಮುಂಬರುವ ಜೀವನದಲ್ಲಿ ಕಾಣಬಹುದು.

ಬುಧವಾರ ಜನಿಸಿದಂತಹ ವ್ಯಕ್ತಿಗಳಿಗೆ ಸರಸ್ವತಿ ದೇವಿಯ ವಿಶೇಷ ಆಶೀರ್ವಾದ ಅನುಗ್ರಹ ಇರುತ್ತದೆ. ಆದರೆ ಇವರು ಸ್ವಲ್ಪ ಚಂಚಲ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.ಆ ಚಂಚಲತೆಯನ್ನು ಕಡಿಮೆ ಮಾಡಿಕೊಂಡಿದ್ದೆ ಆದಲ್ಲಿ ತುಂಬಾ ಬುದ್ಧಿವಂತರು ಬುಧವಾರ ಜನಿಸಿದ ವ್ಯಕ್ತಿಗಳು ಯಾವುದೇ ಕಠಿಣ ಕೆಲಸಗಳನ್ನು ಬಹಳ ಸುಲಭವಾಗಿ ತರ್ಕಬದ್ಧವಾಗಿ ಮಾಡಿ ಮುಗಿಸುವವರು.

ಇವರು ಕಡಿಮೆ ಅವಧಿಯಲ್ಲಿ ಅತಿ ಎತ್ತರದ ಪದವಿಯನ್ನ ಸಮಯ ವ್ಯರ್ಥ ಮಾಡದೇ ಪಡೆಯುವಂತಹ ವ್ಯಕ್ತಿತ್ವದವರು.ಇವರು ಅನೇಕ ವೃತ್ತಿಗಳನ್ನು ಏಕಕಾಲಕ್ಕೆ ಮಾಡಲು ಇಚ್ಛಿಸುತ್ತಾರೆ. ಆ ಮೂಲಕ ತನ್ನತನದ ಮೂಲವನ್ನು ಹೆಚ್ಚಾಗಿಸುವಂತಹ ಇಚ್ಛೆ ಇವರದು ಇವರದ್ದಾಗಿರುತ್ತದೆ. ಬುಧವಾರ ಜನಿಸಿರುವ ವ್ಯಕ್ತಿಗಳು ಮಲ್ಟಿ ಟ್ಯಾಲೆಂಟ್ ಪರ್ಸನ್ ಅಂತಾನೆ ಹೇಳಬಹುದು. ಇವರ ಮುಖ ಲಕ್ಷಣವು ವಯಸ್ಸಿಗೆ ಕಮ್ಮಿ ಇರುವ ಹಾಗೆ ತೋರುತ್ತದೆ. ಇವರು ಇಂಪಾದ ಹಾಡುಗಳನ್ನು ಹೆಚ್ಚು ಕೇಳಲು ಇಷ್ಟಪಡುತ್ತಾರೆ. 

Leave a Reply

Your email address will not be published. Required fields are marked *