ಸಾಲದ ಬಾಧೆಯಿಂದ ಮುಕ್ತಿಗಾಗಿ ತಪ್ಪದೇ ಈ 3 ಸಿಂಪಲ್ ಟಿಪ್ಸ್ ಪಾಲಿಸಿ| ಹಾಗು ಆದಷ್ಟು ಬೇಗ ಸಾಲ ಮುಕ್ತರಾಗಿ

ಸಾಲದ ಬಾಧೆಯಿಂದ ಮುಕ್ತಿಗಾಗಿ ತಪ್ಪದೇ ಈ 3 ಸಿಂಪಲ್ ಟಿಪ್ಸ್ ಪಾಲಿಸಿ| ಹಾಗು ಆದಷ್ಟು ಬೇಗ ಸಾಲ ಮುಕ್ತರಾಗಿ

ಸರ್ವರಿಗೂ ನಮಸ್ಕಾರ, ಮನುಷ್ಯ ಎಂದ ಮೇಲೆ ಸಮಸ್ಯೆಗಳು ಬರುವುದು ಸಹಜ ಆ ಸಮಸ್ಯೆಗಳನ್ನು ಎದುರಿಸಿ ನಿಲ್ಲುವವರು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡುತ್ತಾರೆ ಹಾಗೂ ಅದು ಹಣಕಾಸಿನ ಸಮಸ್ಯೆ ಆಗಿದ್ದರೆ ಎಂತಹ ದೊಡ್ಡ ವ್ಯಕ್ತಿ ವ್ಯಕ್ತಿಗಳಾಗಲಿ ಬೇರೆಯವರ ಬಳಿ ಸಾಲವನ್ನು ಪಡೆಯಬೇಕಾಗುತ್ತದೆ, ಅಂತಹ ಸನ್ನಿವೇಶಗಳಲ್ಲಿ ನಾವು ತುಂಬಾ ಜಾಗರೂಕರಾಗಿರಬೇಕು ಹಾಗೂ ಆ ಸಾಲವನ್ನು ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎನ್ನುವುದನ್ನು ಮನದಲ್ಲಿ ಇಟ್ಟುಕೊಳ್ಳಬೇಕು, ಮೊದಲಿನಿಂದಲೇ ಆ ಸಾಲವನ್ನು ತೀರಿಸಲು ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು

ಮತ್ತು ನೀವು ಎಷ್ಟು ದಿನಗಳ ಅವಧಿಯಲ್ಲಿ ಅದನ್ನು ತೀರಿಸಬೇಕು ಎನ್ನುವುದನ್ನು ಕೂಡ ಮೊದಲೇ ನಿಗದಿಪಡಿಸಿಕೊಳ್ಳಿ, ಇಲ್ಲದಿದ್ದರೆ ಜೀವನಪೂರ್ತಿ ದುಡಿದಿದ್ದನ್ನು ಎಲ್ಲ ಸಾಲ ತೀರಿಸಲು ಕೊಡಬೇಕಾಗುತ್ತದೆ ಹಾಗೂ ಸಾಲದ ಸುಳಿಯಿಂದ ಹೊರ ಬರಬೇಕಾದರೆ ಈ ಕೆಲವು ಟಿಪ್ಸ್ ಗಳನ್ನು ಅಳವಡಿಸಿಕೊಂಡರೆ ನಿಮ್ಮ ಸಾಲವನ್ನು ಆದಷ್ಟು ಬೇಗ ತೀರಿಸಬಹುದು

ಮೊದಲನೆಯದಾಗಿ : ಪ್ರತಿ ಬುಧವಾರ ಎರಡು ಸಣ್ಣ ಕಾಲಿ ಮಡಿಕೆಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು, ಹಾಗೆ 6 ವಾರಗಳವರೆಗೆ ಅಂದರೆ ಒಂದುವರೆ ತಿಂಗಳ ಕಾಲ ಮಡಿಕೆಯನ್ನು ಹರಿಯುವ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಒಳ್ಳೆ ಯಶಸ್ಸನ್ನು ಕಾಣಬಹುದು ಮತ್ತು ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

ಎರಡನೆಯದಾಗಿ : ಪ್ರತಿ ಶುಕ್ರವಾರದಂದು ಜುಟ್ಟು ತೆಗೆದ ಒಂದು ತೆಂಗಿನಕಾಯಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಲಕ್ಷ್ಮಿ ತಾಯಿಯ ಮುಂದೆ ಇಟ್ಟು ಶ್ರದ್ಧೆಯಿಂದ ಬೇಡಿಕೊಂಡು ಮನಃಪೂರ್ವಕವಾಗಿ ಲಕ್ಷ್ಮಿ ದೇವಿಗೆ ನಮಸ್ಕರಿಸಿ, ನಂತರ ಆ ತೆಂಗಿನ ಕಾಯಿಯನ್ನು ಕೂಡ ನೀರಿನಲ್ಲಿ ಬಿಡಬೇಕು ಹಾಗ ನೀವು ಅಂದುಕೊಂಡ ಬಯಕೆಗಳು ಈಡೇರುತ್ತವೆ ಮತ್ತು ನಿಮ್ಮ ಸಾಲವನ್ನು ಕೂಡ ಆದಷ್ಟು ಬೇಗ ತೀರಿಸಬಹುದು.

ಮೂರನೇ ಸಲಹೆ ಏನೆಂದರೆ : ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಎರಡೂ ಅಂಗೈಗಳನ್ನು ಉಜ್ಜಿ ಹತ್ತಿರ ತಂದು ನೋಡಿಕೊಳ್ಳಬೇಕು, ನಿಮ್ಮ ಎರಡೂ ಅಂಗೈಗಳನ್ನು ನೋಡುವುದರಿಂದ ವಿಷ್ಣು ಮತ್ತು ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ದೊರೆಯುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

Leave A Reply

Your email address will not be published.