ವೀಕ್ಸ್ ವೇಪೋರೆಬ್ ಶೀತ, ನೆಗಡಿ, ತಲೆನೋವಿಗೆ ಅಷ್ಟೇ ಅಲ್ಲದೆ ಇನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಗೊತ್ತಾ

Recent Posts

ವೀಕ್ಸ್ ವೇಪೋರೆಬ್ ಶೀತ, ನೆಗಡಿ, ತಲೆನೋವಿಗೆ ಅಷ್ಟೇ ಅಲ್ಲದೆ ಇನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಗೊತ್ತಾ

ನಮಸ್ಕಾರ ಸ್ನೇಹಿತರೇ, ವಿಕ್ಸ್ ಬಗ್ಗೆ ತಿಳಿಯದೆ ಇರುವವರು ಕಡಿಮೆ ಪ್ರತಿಯೊಂದು ಮನೆಯಲ್ಲೂ ಇದನ್ನು ಬಳಸಲಾಗುತ್ತದೆ, ಸಾಮಾನ್ಯವಾಗಿ ವಿಕ್ಸ್ ಅನ್ನು ಶೀತ ಕೆಮ್ಮು ಕಟ್ಟಿದ ಮೂಗು ಎದೆ ಮತ್ತು ಗಂಟಲಿನ ಕೆರೆತಕ್ಕೆ ಬಳಸುತ್ತೇವೆ ಆದರೆ ಇದರ ಇನ್ನೂ ಕೆಲವು ವಿಶೇಷ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ, ಬನ್ನಿ ಹಾಗಾದರೆ ವೀಕ್ಸ್ ಅನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎಂದು ತಿಳಿಯೋಣ

ಕೀಟಗಳನ್ನು ದೂರವಿಡಬಹುದು: ಕುತ್ತಿಗೆ, ಮೊಣಕಾಲಿನ ಅಡಿಭಾಗ, ಮೊಣಕೈ ಮತ್ತು ಕಿವಿಯ ಹಿಂದಿನ ಭಾಗಕ್ಕೆ ವಿಕ್ಸ್ ಅಚ್ಚಿ ಕೊಂಡರೆ ಆಗ ಖಂಡಿತವಾಗಿಯೂ ಇದು ಕೀಟಗಳನ್ನು ದೂರಮಾಡುತ್ತದೆ

ಒಡೆದ ಪಾದಗಳಿಗೆ ಉತ್ತಮ: ಒಡೆದ ಪಾದಗಳು ಮತ್ತು ಹಿಂಗಾಲಿಗೆ ಸ್ವಲ್ಪ ವಿಕ್ಸ್ ಅನ್ನು ಹಂಚಿಕೊಂಡ ಬಳಿಕ ಸಾಕ್ಸ್ ಧರಿಸಿ ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಕಾಲನ್ನು ತೊಳೆಯಿರಿ ರಾತ್ರಿ ಹೊತ್ತು ಹೀಗೆ ಮಾಡಿದರೆ ಕಂಡಿತವಾಗಿಯೂ ಇದು ಪಾದಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ನಯಗೊಳಿಸುತ್ತದೆ ಒಡೆದ ಪಾದಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಕಿವಿ ನೋವನ್ನು ನಿವಾರಿಸುತ್ತದೆ: ಹತ್ತಿಗೆ ಸ್ವಲ್ಪ ವಿಕ್ಸ್ ಅನ್ನು ಹಚ್ಚಿ ಅದನ್ನು ನೋವು ಇರುವಂತಹ ಕಿವಿಯ ಒಳಗೆ ಹಾಕಿ ನಿಮಗೆ ತಕ್ಷಣವೇ ಪರಿಹಾರ ಸಿಗುತ್ತದೆ.

ನರವಳಿ ಸಮಸ್ಯೆ ನಿವಾರಣೆಯಾಗುತ್ತದೆ: ನರವಳಿ ಇರುವ ಜಾಗಕ್ಕೆ ರಾತ್ರಿ ಹೊತ್ತು ವಿಕ್ಸ್ ಅನ್ನು ಹಚ್ಚಿ ಅದನ್ನು ಹತ್ತಿಯಿಂದ ಮುಚ್ಚಿ ಬೆಳಗ್ಗೆ ನೀರಿನಿಂದ ತೊಳೆಯಿರಿ ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರ ಕಂಡು ಬರುತ್ತದೆ, ಎರಡು ವಾರಗಳ ತನಕ ನೀವು ಇದನ್ನು ಹೀಗೆ ಮುಂದುವರಿಸಿದರೆ ಖಂಡಿತವಾಗಿಯೂ ನರವಳಿ ಸಮಸ್ಯೆ ನಿವಾರಣೆಯಾಗುತ್ತದೆ.

ಮೊಡವೆಗಳನ್ನು ಹೋಗಲಾಡಿಸುತ್ತದೆ: ಮೊಡವೆಗಳಿಗೆ ವಿಕ್ಸ್ ಅನ್ನು ಹಚ್ಚಿದರೆ ಅದರಿಂದ ಮೊಡವೆ ಬೇಗನೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲ ಇದು ಮೊಡವೆಗಳು ಹೆಚ್ಚಾಗುವುದನ್ನು ತಡೆಯುತ್ತದೆ, ಯಾಕೆಂದರೆ ವಿಕ್ಸ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಲಕ್ಷಣವಿದೆ, ಹಾಗೂ ಇದರಲ್ಲಿರುವ ಕರ್ಪೂರ ಮತ್ತು ಸೀಡರ್ ಲೀಫ್ ಆಯಿಲ್ ಚರ್ಮದ ತೊಂದರೆಗಳನ್ನು ಬೇಗನೆ ನಿವಾರಿಸುವ ಶಕ್ತಿಯನ್ನು ಹೊಂದಿದೆ.

ನೋಡಿದಿರಲ್ಲ ವಿಕ್ಸ್ ಅನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎಂದು

https://youtu.be/vz459xTOhkY

Leave a Reply

Your email address will not be published. Required fields are marked *